Pages Navigation Menu

The Entertainment World Latest News, Movies, Videos, Gossips & Photos

ಆರ್ಥಿಕ ವರ್ಷ 27ರ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರಿಗೆ ಒಟ್ಟು ₹4,666 ಕೋಟಿ ವಿಮಾ ಪ್ರಯೋಜನ ಪಾವತಿಸಿದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್

Posted by on Jul 29, 2026 in Kannada News | 0 comments

ಹಣಕಾಸು ವರ್ಷ 2027ರ ಮೊದಲ ತ್ರೈಮಾಸಿಕದಲ್ಲಿ ಶೇ. 4ರಷ್ಟು ವೃದ್ಧಿಸಿದ ಟರ್ಮ್ ಪ್ಲಾನ್ ವ್ಯವಹಾರ ಮೊದಲ ತ್ರೈಮಾಸಿಕದಲ್ಲಿ ಉದ್ಯಮದಲ್ಲೇ ಅತ್ಯುನ್ನತವಾದ ಶೇ. 3ರಷ್ಟು ಕ್ಲೈಮ್ ಸೆಟಲ್‌ಮೆಂಟ್ ಅನುಪಾತ ಸಾಧನೆ ತೆರಿಗೆಯ ನಂತರದ ನಿವ್ವಳ ಲಾಭ ವಾರ್ಷಿಕ ಆಧಾರದ ಮೇಲೆ ಶೇ. 8ರಷ್ಟು ಏರಿಕೆಯಾಗಿ ₹386 ಕೋಟಿಗೆ ತಲುಪಿದೆ ಮುಂಬೈ: ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಸಂಸ್ಥೆಯು ಜೂನ್ 2026ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾರ್ಷಿಕ ಆಧಾರದ ಮೇಲೆ ಶೇ. 8ರಷ್ಟು ಪ್ರಗತಿಯೊಂದಿಗೆ ₹386 ಕೋಟಿ ನಿವ್ವಳ ಲಾಭ ಗಳಿಸಿದೆ. ಪ್ರಮುಖವಾಗಿ, ಕಂಪನಿಯ ಟರ್ಮ್ ಪ್ಲಾನ್ (ರಿಟೇಲ್ ಪ್ರೊಟೆಕ್ಷನ್) ವ್ಯವಹಾರವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾರ್ಷಿಕವಾಗಿ ಶೇ. 60.4ರಷ್ಟು ಭರ್ಜರಿ ಪ್ರಗತಿ ದಾಖಲಿಸಿದೆ. ಇದರೊಂದಿಗೆ, ಕಂಪನಿಯ ಹೆಸರನ್ನು ಐಸಿಐಸಿಐ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕಂಪನಿಯ ಆಡಳಿತ ಮಂಡಳಿ (ಬೋರ್ಡ್) ಅನುಮೋದನೆ ನೀಡಿದೆ. ಈ ಕುರಿತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನೂಪ್ ಬಾಗ್ಚಿ ಮಾತನಾಡಿ, “ಗ್ರಾಹಕರಿಗೆ ಮೊದಲ ಆದ್ಯತೆ ನೀಡುವುದು ನಮ್ಮ ಕಾರ್ಯತಂತ್ರದ ಪ್ರಮುಖ ಮೂಲಮಂತ್ರವಾಗಿದೆ. ತನಿಖೆಗೆ ಒಳಪಡದ ಕ್ಲೈಮ್‌ ಗಳಿಗೆ ಕೇವಲ 1 ದಿನದ ಸರಾಸರಿ ಅವಧಿಯಲ್ಲಿ ಪರಿಹಾರ ಒದಗಿಸುವ ಮೂಲಕ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಉದ್ಯಮದಲ್ಲೇ ಅತ್ಯುನ್ನತವಾದ ಶೇ. 3ರಷ್ಟು ಕ್ಲೈಮ್ ಸೆಟಲ್‌ ಮೆಂಟ್ ಅನುಪಾತವನ್ನು ನಾವು ಸಾಧಿಸಿದ್ದೇವೆ....

Read More